Posted by: ashwath | October 8, 2009

ಮನ ಮೆಚ್ಚಿದ ಸುಳ್ಳು …!

http://static.desktopnexus.com/wallpapers/132963-bigthumbnail.jpg

ನೀ ನನ್ನ ನಗಿಸಿದಾಗ
ಬಂದ ಕೆನ್ನೆಗಳು …

ನೀ ಹೊರಟಾಗ ತುಂಬಿತು
ನೆನಪುಗಳ ಪ್ರವಾಹದಿಂದ..!!
ನೀ ಹೇಳಿದೆ ಸಾವಿರ ಸುಳ್ಳು .
ಗೊತ್ತಿದ್ದರೂ ಸುಮ್ಮನಿದ್ದ ನಾನು
ಮನಸಾರೆ ಮೆಚ್ಚಿದ
ಕೊನೆಯ ಸುಳ್ಳು …..
`ನೀ ನನ್ನ ಪ್ರೀತಿಸುವೆ’ ಎಂದದ್ದು !
ಮೋಹಭರಿತ ಸುಳ್ಳದು …
ಆಗಾಗ ಕಾಡುತಿದೆ ಕವಿಯಾಗಲೆಂದು !

Posted by: ashwath | October 5, 2009

ಕಳೆದ ಮುತ್ತು ….?!

http://www.stpixels.com/images/l497_258409.jpg

ಚೂರಾಯ್ತು ಹೃದಯದ ಚಿಪ್ಪು,
ಕಳೆದು ಹೋಯ್ತು ಪ್ರೀತಿಯ ಮುತ್ತು.
ದೂರದ ಪ್ರೀತಿಯದು ಇನ್ನ್ಯಾರದೋ ಸ್ವತ್ತು !

ನಾ ಬರೆದ ಕವನಗಳೆಲ್ಲಾ,
ಬರೀ ನೆನಪುಗಳ ಚರಿತ್ರೆಯಾಯ್ತು ,
ಪ್ರತಿ ಸಾಲೂ ನನ್ನ ಈಗ ದೂಷಿಸುತ್ತಿರಲು .

ಕಮರಿಹೋದ ನನ್ನ ಕನಸಿನ ಹೂಗಳು,
ಅರಳಲಿ ಅವಳ ಬಾಳಲಿ ಎಂದೆಂದೂ ,
ಆಶಿಸುವೆ ಅವು ಸದಾ ನಗುತಿರಲೆಂದು

ಚೂರಾದ ಚಿಪ್ಪಿನಲಿ,
ಉಸಿರಾಡುವ ಪ್ರೇಮಿ ನಾನು .
ಕಾಡುತ್ತಿದೆ ಇನೂಡು ಮಳೆಯ ಭಯವು !

Posted by: ashwath | April 21, 2007

ಪ್ರೀತಿಗಾಗಿ……. !

ಕಟ್ಟಿಕೊಂಡ ಕನಸು ಕೆಸರಲ್ಲಿ ಬೀಳಲಿ ,
ಕೆಂದಾವರೆಯಾಗಿ ಅರಳಿಸುವೆ ಪ್ರೀತಿ..
ಬಾಡಿಹೋಗಲಿ ಉರಿಬಿಸಿಲಲ್ಲಿ ಬೆಂದು ,
ಉಸಿರು ತುಂಬಿ ಅರಳಿಸುವೆ ಪ್ರೀತಿ..!

ಮುಳುಗಿ ಹೋಗಲಿ ಜಲಪ್ರಳಯದಿ ,
ವರಾಹಾವತಾರವನ್ನೆತ್ತಿ ಉಳಿಸುವೆ ಪ್ರೀತಿ .
ಎದುರು ಬರುವ ಕಂಟಕರು ಯಾರೇ ಇರಲಿ ,
ಕತ್ತಿ ಹಿಡಿದು ಉಳಿಸುವೆ ಪ್ರೀತಿ…!

ಸಾವಿರ ಲೋಕದ ಸ್ವಪ್ನ ಸುಂದರ ಪ್ರೀತಿ,
ಸಾವಿರ ಜನ್ಮಕ್ಕೂ ಅರ್ಥವೇ ಪ್ರೀತಿ ,
ಕಾಲ ದೇಶಗಳ ಎಲ್ಲೆಯಿಲ್ಲದ ಪ್ರೀತಿ ,
ನಿನಗಾಗಿಯೇ ನಾನೆಂದೂ ಬದುಕುತಿ..!

Posted by: ashwath | November 1, 2006

ನಾನು ಕನ್ನಡದ ಕಂದ…!

 

ಕನ್ನಡವೆಂದರೆ ಭಾಷೆಯಲ್ಲ ,
ಅದೊಂದು ಚಿರಂಜೀವ !
ಭಾವಗಳಿವೆ ,ಸಂಸ್ಕೃತಿಯಿದೆ ,
ನೀತಿಯಿದೆ , ಮಂತ್ರವಿದೆ…….
ಹೆಸರಲ್ಲಿ ಏನಿಲ್ಲ ?!
ಬೆಳೆಯುತ್ತಿರಲಿ ಕನ್ನಡ,
ಭಾಷಾಭಿಮಾನಿಗಳಿಂದ…
ಭಾಷಾಂಧಿಗಳಿಂದಲ್ಲ..!!
ಬರಲಿ ಬಿಡಿ ಹೊಸ ಪದಗಳು
ಮಣ್ಣಿನ ವಾಸನೆ ಬೆರೆತು `ಕನ್ನಡವಾಗಲಿ’
ಅದರಲ್ಲೂ ಮಿತಿ ಇರಲಿ..
ಬೇರೆ ಭಾಷೆಗಳಿಗೂ ನಮ್ಮ ಬಳುವಳಿಯಿದೆ..
ಕಾಲ-ದೇಶಗಳ ಮೀರಿದ ಭಾಷೆ ಕನ್ನಡ.
ಎಲ್ಲೆಯಿಲ್ಲದ ಭಾಷೆ ಕನ್ನಡ,
ಜೀವ ಸಂಕುಲದ ಉಸಿರು ಕನ್ನಡ,
ಜೀವ ಜೀವದ ತೊದಲ್ನುಡಿ ಕನ್ನಡ.
ಯಾವ ಮೂಲೆಯಲ್ಲಾದರೂ ಇರು…
ಯಾವ ಭಾಷೆಯವನೇ ಆಗಿರು
ನಿನ್ನ ನೋವಿಗೂ ದನಿಯಾಗುವಳು..
`ಅಮ್ಮ’,”ಕನ್ನಡಮ್ಮ”
ಅವಳ ಮಡಿಲಲ್ಲೇ ಉಸಿರಾಡುತಿರುವೆ..
ನಾನು ಕನ್ನಡದ ಕಂದ…!

Posted by: ashwath | October 30, 2006

ಕವಿಯಾದೆ ನಾನು….!

ಸೂಜಿ ಕಣ್ಣ ಹುಡುಕುವ ಹಾಗೆ
ಹುಡುಕಿದೆ ನಾ ಗೆಳತಿಗೆ !
ಕಂಡಳೊಮ್ಮೆ ಕನಸ ಕನ್ಯೆ
ನನ್ನ ಮನದ ಅಪ್ಸರೆ..!

ಉಕ್ಕಿತೊಮ್ಮೆ ಮನದ ಕಡಲು
ಆ ಚಂದ್ರ ಕಾಂತಿಗೆ !
ಮಾತು ಮರೆತು ಮೂಗನಾದೆ
ಆ ಮೌನ ರಾಗ ಸ್ವರದಲೇ !

ವಾಸ್ತವ ಮರೆತು , ಅರಿವು ಹೋಗಿ
ಭಾವಲೋಕ ಕಂಡೆನಾ !
ನಿದ್ದೆ ಗಿದ್ದೆ ಏಕೆ ಬೇಕು ?
ಅವಳ ದೃಶ್ಯ ಮಾತ್ರ ಸಾಕು!

ಅವಳ ನಗುವೆ ಬರೆದ ಪಲ್ಲವಿಗೆ ,
ಎಂದೂ ಮುಗಿಯದ ಕವಿತೆಗೆ ,
ಅವಳೇ ಸ್ಪೂರ್ತಿಯಾದ ಸಾಲುಗಳಿಗೆ
ಕವಿಯಾದೆ ನಾನು..!!

Posted by: ashwath | October 27, 2006

ನಾನೆಂಬ ಅಂಚೆ ಹುಡುಗ..!

ನಾನೆಂಬ ಅಂಚೆ ಹುಡುಗ ,
ಹೊತ್ತೊಯ್ಯುವನು ನೂರಾರು ಲಕೋಟೆಗಳ !
ಇವನೋ ಬಿಡುವಿಲ್ಲದ ಕೆಲಸದಾಳು .
ತೊಡುವನು ಬಣ್ಣ ಬಣ್ಣದ ಬಟ್ಟೆಗಳನ್ನು,
ಸಮವಸ್ತ್ರ ಇವನಿಗೆ ಬೇಕಿಲ್ಲ !

ಯಾರಿಗೆ ಯಾವ ಪತ್ರ ರವಾನಿಸಬೇಕೋ..?
ಅದು ಇವನಿಗೇ ತಿಳಿದಿಲ್ಲವಲ್ಲ !
ಆದರೂ ,ರವಾನಿಸುವ ನಿರ್ದಿಷ್ಟ ವ್ಯಕ್ತಿಗೆ !
ಯಾರಿಂದ ಬಂದ ಪತ್ರವೆಂದೇ ತಿಳಿದಿಲ್ಲ .
ಎಲ್ಲರೂ ತಿಳಿಯುವರು `ಅವನೇ ಬರೆದ ಪತ್ರವಿದು!’ 

ವಿಷಯ ತಿಳಿದಾವರಿಗೋ ಏನಾದರೊಂದಾಗುವುದು !
ಕೆಲವರಿಗೆ ಕೋಪ, ಕೆಲವರಿಗೆ ತಾಪ ,
ಮತ್ತೆ ಕೆಲವರಿಗೆ ದುಃಖ,ಸಂತೋಷ…
ಕೆಲವರಿಗಾದರೆ ಮೈಮನ ರೋಮಾ0ಚನ ! 
ಮತ್ಯಾರಿಗೋ `ಶುರೂ ಪ್ರೇಮ ಲೋಕ !’

ಪತ್ರಗಳೆಲ್ಲಾ ಇವನೇ ರವಾನಿಸಬೇಕು .
ತೋರಿಸದೇ ಇವನೇ ಓದಬೇಕು , ಕರ್ತವ್ಯ !?
ಆದರೂ, ಪತ್ರ ಬರೆದವ ಇವನೆಂದೇ ತಿಳಿಯುವರು!
ಅದನ್ನೇ ನಂಬುವರು ಎಷ್ಟೋ ಮುಗ್ದರು .
ನಾನೆಂಬ ಅಂಚೆ ಹುಡುಗರು..ಅಂಚೆ ಹುಡುಗರು..!

Posted by: ashwath | October 26, 2006

ದೇವದಾಸಿ…

ಸೂರ್ಯ,ಚಂದ್ರ,ತಾರೆಗಳೆಲ್ಲಾ ಇನ್ನೂ ಇವೆಯೇ?!
ಈಗಲೂ ಆಗಸದಿ ಪ್ರತಿದಿನ ಮಿನುಗುವುದೇ..?
ನನಗೀಗ ಅವು ಕೇವಲ ನೆನಪು ಮಾತ್ರ !
ಹಾ..! ಕೇವಲ ನೆನಪುಗಳು ಉಳಿದಿವೆ..!

ಬೆಳಕೆಂದರೆ ನನ್ನ ಪಾಲಿಗೆ ಬುಡ್ಡಿ ದೀಪ.
ಗಾಳಿ ಎಂದರೆ ಕಾಮುಕರ ಬಿಸಿಯುಸಿರು.
ಮಳೆಯೆಂದರೆ ಅವರ ಬೆವರು , ನನ್ನ ಕಣ್ಣೀರು.
ಜನ ಎಂದರೆ ಮಾತ್ರ ನೆನಪಲ್ಲಿ ಉಳಿದವರು!

`ಇಲ್ಲಿಯೇ ಸ್ವರ್ಗ , ಇಲ್ಲಿಯೇ ನರಕ`
ಇಲ್ಲಿಯೇ ಬಾಳಬೇಕು ಕನಸುಗಳ ಅದುಮಿಕೊಂಡು.
ನನಗೂ ಇವೆ ಭಂಡ ಭಾವನೆಗಳು..!
ಗೋಳು ಕೇಳುವವರು ಯಾರು ? ಶೃಂಗಾರಿಸಿಕೊಳ್ಳಬೇಕು..!?

Posted by: ashwath | October 5, 2006

ನರಕದಲ್ಲಿ ಸ್ವರ್ಗ…….?!

  

ಸೀದ ಕಾವಲಿಯ ಮೇಲೆ,
ಬೊಗಸೆ ನೀರಿನ ಸಿಂಚನ !
ಶಬ್ದದ ಹಾಗೇ ಇದೆ ಜೀವನ…
ಸಿಕ್ಕರೆ ತುಂಡು ರೊಟ್ಟಿ ಅದೇ ಮೃಷ್ಟಾನ್ನ..!

ಅಲ್ಲೆಲ್ಲೋ ಒಡೆದ ಬೀದಿ ಕೊಳಾಯಿ ,
ಎರಚಾಟದಲ್ಲೇ ಪೋಲಾಗುವ ಚಿಲುಮೆ.!
ಮತ್ತೆ ಚಿಂದಿ ಆಯುವುದೇ ಕಾಯಕ…..
ಬದುಕು ಬದುಕಲ್ಲ ಬವಣೆ ! “

ಸಾವಿರ ಕನಸುಗಳಿವೆ ಕಂಗಳಲ್ಲಿ ,
ನನಸಾಗುವುದೆಂದೋ ಪ್ರಶ್ನಾರ್ಥಕ ?!
ಹರಿದ ಚೆಡ್ದಿಯಲ್ಲೇ ಮೆರವಣಿಗೆ ,
ಮುಗ್ದ ನಗುವೇ ಬರವಣಿಗೆ..!

Posted by: ashwath | October 2, 2006

ನೀ ಮುಡಿಯದ ಗುಲಾಬಿ………….

 

click here to joint funlok group 

ಬಯಸಿ ಬಯಸಿ ಭಾವನೆಗಳು ಹುಟ್ಟಿಲ್ಲ ,
ಹುಟ್ಟಿತೆಂದೋ ಮೊಳೆತ ಸಸಿಯ ಹಾಗೆ..!
ಗುರುತಿಸಿದರೂ ಅರಿಯದ ಮುಗ್ದನಾಗಿದ್ದೆ .
ಇಂದು ಇದರಲ್ಲಿ ಸಾವಿರಾರು ಚೆಂಗುಲಾಬಿಗಳು..!

ನೀನಾಗಿಯೇ ಬೆಳೆಸಿದ ಗುಲಾಬಿ ತೋಟವಿದು ,
ನಂಬದಿದ್ದರೂ ಇದು ನಿಜ ನಿನ್ನಾಣೆಗೂ……!
ಕಂಪು ಬಡಿಯದೇ ನಿನ್ನ ನೀಳ ಮೂಗಿಗೆ ?
ನೀನಾಗಿಯೇ ಬಂದು ಈ ಹೂ ಮುಡಿಯೇ..!

ಎಂದಾದರೂ ಬಾ ಎಂದು ಕಾಯುತ್ತಿರುವೆ .
ಸಾವಿರ ಜನ್ಮದ ಆಹ್ವಾನದೊಂದಿಗೆ .!
ಮುಳ್ಳಿರಬಹುದು ಭಯಬೇಡ ನಾನಿರುವೆ..
ಪ್ರೀತಿಯಿಂದ ಬಂದು ನನ್ನ ಪ್ರೀತಿ ಅನುಭವಿಸೇ …!

Posted by: ashwath | October 2, 2006

ನೆನಪು ಮಾತ್ರ…!

ಒಂದು ತಂತಿಯ ಒಂದೇ ಸಮನೆ
ಮತ್ತೆ ಮತ್ತೆ ಮೀಟಿದೇ …
ಒಂದಿನಿತೂ ಬಿಡುವೂ ನೀಡದೇ ..
ನಿನ್ನ , ಮಾಯೇಯಾ ಆ ಬೆರಳಲೇ !

ಉಸಿರು ಉಸಿರಲೂ ನಿಂದೇ ರಾಗ
ಹೊಮ್ಮುವಂತೇ ನುಡಿಸಿದೆ..
ಏಕೋ ಏನೋ ತಿಳಿಸದೇ..
ನನ್ನ ಮನಸನೇ ಅತಿಕ್ರಮಿಸಿದೆ !

ಮಾಡಿದ್ದೆಲ್ಲ ಮಾಡಿ ನೀನು ,
ಮಾಯೇಯಾಗಿ ಹೋದೆಯೇ,
ನೀ , ನೆನಪು ಮಾತ್ರ ಉಳಿಸಿದೆ .
ನನ್ನ ಹುಚ್ಚನಾಗಿ ಮಾಡಿದೆ…!

Older Posts »

Categories