ವೈಚಾರಿ-ಕಥೆ!

ಬೇರು ಒಂದೇ ….

ಒಂದಾನೊಂದು ಕಾಲ … ಅಂದರೆ ಮನು ಕುಲ ನಾಗರೀಕತೆ ಕಲಿತ ಹೊಸದು … ಆಗ ಒಂದಾನೊಂದು ಊರಿನಲ್ಲೂ ಒಂದು ಮನೆ, ಅಲ್ಲಿ ನಾಲಕ್ಕು ಜನ ಅಣ್ಣ ತಮ್ಮಂದಿರು. ಊರಲ್ಲಿ ಇದ್ದಿದ್ದು ಇನ್ನೋದು ಮನೆ ಅಷ್ಟೇ ..!! ಆ ನಾಲ್ವರಿಗೂ ನಾಲಕ್ಕು ಚಿಕ್ಕ ಚಿಕ್ಕ ಮಕ್ಕಳು … ! ತುಂಬಿದ ಮನೆಯಲ್ಲಿ ಎಲ್ಲ ಕೆಲಸಗಳು ಅವರೇ ಮಾಡ ಬೇಕು .. ! ಒಬ್ಬ ಅಡುಗೆ ಕೆಲಸ, ದೇವರ ಪೂಜೆ, ಮಕ್ಕಳಿಗೆ ವಿಧ್ಯಾಭ್ಯಾಸ ಮಾಡಿಸುತ್ತಿದ್ದ … ಇನ್ನೊಬ್ಬ ಮನೆ,ತೋಟ,ಗದ್ದೆ ಕಾಯುವ ಕೆಲಸ, ಮತ್ತೊಬ್ಬ ವ್ಯವಹಾರಗಳನ್ನು ನೋಡಿಕೊಂಡು ಊರಿಂದ ಊರಿಗೆ ಪ್ರಯಾಣಿಸಿ ವ್ಯಾಪಾರ ಮಾಡಿ ಬರುತ್ತಿದ್ದ.. ಅಲ್ಲಿ ಬಂದ ದ್ರವ್ಯದಿಂದ ಈ ಊರಲ್ಲಿ ಸಿಗದ ಅಥವಾ ಇವರು ಬೆಳೆಸದ ಅವಶ್ಯ ವಸ್ತುಗಳನ್ನು ಕೊಂಡು ಬರುತ್ತಿದ್ದ ,,. ಮತ್ತೊಬ್ಬ ಇರುವ ಭೂಮಿಯನ್ನು ಉತ್ತು ಬಿತ್ತು, ಮನೆಯ ಇತರ ಕೆಲಸಗಳನ್ನೂ ಮಾಡುತಿದ್ದ …. ಅವರವರ ಕೆಲಸಗಳ ಅನುಗುಣವಾಗಿ ಅವಷ್ಯವಾದ ಆಹಾರ ಸಹ ರೂಡಿ ಆಯಿತು! ಒಬ್ಬನಿಗೆ ಸಾತ್ವಿಕ ಆಹಾರ, ಮತ್ತೊಬ್ಬನಿಗೆ ರಜಸ್ಸು, ಇನ್ನೊಬ್ಬನಿಗೆ ಎರಡರ ಮಿಶ್ರಣ!

ಮನೆಯ ಹೊರಗಿನ ಕೆಲಸ ಮಾಡಿ ಬಂದವರು ಹೊರಗೆ ಸ್ನಾನ ಮುಗಿಸಿ ಮನೆಯೊಳಗೆ ಕಾಲಿಡುತ್ತಿದ್ದರು .. ಇದು ಅವರ ಶುಚಿತ್ವದ ನಿಯಮ … ಅವರವರ ಮಕ್ಕಳು ದೊಡ್ಡವರಾದರು … ವಿಧ್ಯಾಭ್ಯಾಸದ ನಂತರ ಅವರೂ ತಂದೆ ತಾಯಿಯರು ಮಾಡುತ್ತಿದ್ದ ಕೆಲಸಗಳನ್ನೂ ಕಲಿತು, ಅದೇ ರೀತಿ ಜವಾಬ್ದಾರಿಗಳನ್ನೂ ಹಂಚಿಕೊಂಡು ಹೋಗುತ್ತಿದ್ದರು … ಹೀಗೆ ನಡೆಯುತ್ತಿತ್ತು ಅವರ ಸುಂದರ ಸಂಸಾರ …

ಕಾಲ ಉರುಳಿತು … ಜೀವನ ಚಕ್ರ ಎಂದಿನಂತೆಯೇ ಸಾಗುತ್ತಿತ್ತು … ಒಮ್ಮೊಮ್ಮೆ ಹೊರಗೆ ಕೆಲಸ ಮಾಡಿತ್ತಿದ್ದವರು ಮನೆಗೆ ಬಂದ ಮೇಲೆ ಸ್ನಾನ ಮಾಡಿ ಶುಚಿಯಾಗಲು ಸೋಮಾರಿತನ ತೋರಿಸಿದರೂ … ಆ ದಿನ ಶುಚಿಯಾದ ಮನೆಯೊಳಗೆ ಕಾಲಿಡದೆ ಹೊರಗೆ ಊಟ ಮುಗಿಸಿ ಅಲ್ಲೇ ಮಲಗುತ್ತಿದ್ದರೂ … ಏನಾಯಿತೋ ಏನೋ ಅದೇ ಅಭ್ಯಾಸವಾಯಿತು … ! ಮತ್ತೆ ಅವರ ಮಕ್ಕಳೂ ಅವರನ್ನೇ ಅನುಸರಿಸಲು ಆರಂಭಿಸಿದರು …

ಅವರರವ ಜವಾಬ್ದಾರಿಗಳು ಕೆಲಸಗಳಾಗಿ, ಕೆಲಸಗಳು ಪರಿಣಿತವಾಗಿ ಮುಂದುವರೆಯಿತು .. ಮುಂದೊಂದು ದಿನ ತುಂಬಿದ ಮನೆ ತುಳುಕಿತು … ಇನ್ನೂ ಹಲವು ಮನೆ ಕಟ್ಟಿದರು. ಅವರ ಪರಿಣಿತ ಕೆಲಸಗಳಿಗೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಹೆಸರಿಸಿಕೊಂಡರು … !! ಮುಂದಿನ ಜನಾಂಗ ಅದನ್ನು ಜಾತಿ,ಮತ ಎಂದೆಲ್ಲಾ ಕರೆದರು. ದಾಯದಿಗಳದರು, ನಾವು ಹೆಚ್ಚು ತಾವು ಹೆಚ್ಚು ಎಂದೆಲ್ಲಾ ಕಿತ್ತಾಡಿದರು. ಅದರ ಪರಿಣಾಮ ಇಂದಿನ ಜಾತಿ (ಅ)ವ್ಯವಸ್ಥೆ, ಎನ್ನಬಹುದೇ? ಆದರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯ ಎಂದೂ ಆಗಲಿಲ್ಲ, ಆಗುವುದೂ ಇಲ್ಲ.

ನಮ್ಮ ಈಗಿನ ಸಮಾಜದಲ್ಲಿ, ಎಷ್ಟೋ ವರುಷಗಳಿಂದ ನಡೆದು ಕೊಂಡು ಬಂದ ಜಾತಿ ವ್ಯವಸ್ತೆ ಮೇಲೂ ಕೀಳು ಎಂಬ ಭಾವನೆಗಳನ್ನು ತೊರೆದು ಅದು ಶುರುವಾದ ರೀತಿಯನ್ನು ಅರ್ಥ ಮಾಡಿಕೊಂಡು, ಒಬ್ಬರನ್ನೊಬ್ಬರು ಗೌರವದಿಂದ ಕಾಣುವ ಶಾಶ್ವತ ಸುಖ ಸಮಾಜದ ಕಲ್ಪನೆಯೊಂದಿಗೆ ಈ ನನ್ನ ಕಾಲ್ಪನಿಕ, ಹಾಗೂ ಸತ್ಯಕ್ಕೆ ಹತ್ತಿರವಾದ ಇತಿಹಾಸದ ಲೇಖನದ ಉದ್ದೇಶ. ಬೇರು ಒಂದು ಈ ಮರಗಳಿಗೆ. ಮರೆತು ಮೂಢರಾಗುವುದೇಕೆ. ನಮ್ಮ ಸಂಸ್ಕೃತಿ ದೊಡ್ಡದು. ಅದಕ್ಕಿಂತಾ ದೊಡ್ಡದು ಮಾನವ ಜನ್ಮ ಅಲ್ಲವೇ?

7 thoughts on “ವೈಚಾರಿ-ಕಥೆ!

  1. ನಿಮ್ಮ ಲೇಖನ ಚೆನ್ನಾಗಿ ಹೊರ ಬಂಧಿಧೆ ಧನ್ಯವಾದಗಳು…..ನಿಮ್ಮ ವಿಚಾರಗಳು ಸ್ವಾಗತಾರ್ಹ….. ಇಂತಿ ನಿಮ್ಮ ಗೆಳೆಯ…….ಕಾರ್ತಿಕ್

  2. ವೊಬ್ಬ ವೆಕ್ತಿ ಈನೊಬ್ಬ ವೆಕ್ತಿ ಎಲ್ಲಧೆ ಭಾಧುಕೊಧಿಲ್ಲ ಆಧರು ಬೇಧ ಭಾವ ಬೇಕು ಅಂತಾನೆ.

    ವಳ್ಳೆ ಕಲ್ಪನೆ. ಕಲ್ಪನೆ ನೀಜವಗೀರಬಹುಧು.

    ಇನ್ನು ಕಲ್ಪಿಸಿಕೊಂಡು ಇನ್ನು ಬರಿಯಬೇಕು. ನನ್ನ ಪ್ರೋತ್ಸಾಹ ಸಾಧ ಏರುಥೆ.

  3. ಕಥೆಯ ಭಾವಾರ್ಥ ತುಂಬ ಚನ್ನಾಗಿದೆ ಆದರೆ ನನ್ನಗನ್ನಿಸುತ್ತದೆ ನಾವು ಮತ್ತೆ ಅಭಿವಕ್ತ ಕುಟುಂಬದೆಡೆ ಗೆ ಹೋಗಲು ಸಾದ್ಯವಿಲ್ಲ ಆದರೆ ಸಂಭದ ಕ್ಕೆ ಪುಷ್ಟಿಕೊಡುವ ಕರ್ಮಗಳನ್ನು ಮಾಡಿ , ನಮ್ಮ ಸುತ್ತಲಿರುವ ಸ್ನೇಹಿತರೊಂದಿಗೆ (ಜಾತಿ ಯ ಕಟ್ತುಪಾಡಿನಿಂದ
    ಹೊರಬಂದು )ಸಹಕರಿಸಿ ,ಸೌಹಾರ್ದದಿಂದ ಜೀವನ ಸಾಗಿಸುವುದು ಅನಿವಾರ್ಯ ಮತ್ತು ಅವಶ್ಯಕತೆ ಕೂಡ .ನಿಮ್ಮ ವಿಶ್ವ ಕುಟುಂಬ
    ಸಂದೇಹ ಸಾರುವ ಕಥೆ ಚನ್ನಾಗಿದೆ.

  4. ಸರಿಪಡಿಸುತಿದ್ದೇನೆ : ಅಭಿವ್ಯಕ್ತ ಮತ್ತು ಸಂದೇಶ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s