Posted by: ashwath | October 5, 2006

ನರಕದಲ್ಲಿ ಸ್ವರ್ಗ…….?!

  

ಸೀದ ಕಾವಲಿಯ ಮೇಲೆ,
ಬೊಗಸೆ ನೀರಿನ ಸಿಂಚನ !
ಶಬ್ದದ ಹಾಗೇ ಇದೆ ಜೀವನ…
ಸಿಕ್ಕರೆ ತುಂಡು ರೊಟ್ಟಿ ಅದೇ ಮೃಷ್ಟಾನ್ನ..!

ಅಲ್ಲೆಲ್ಲೋ ಒಡೆದ ಬೀದಿ ಕೊಳಾಯಿ ,
ಎರಚಾಟದಲ್ಲೇ ಪೋಲಾಗುವ ಚಿಲುಮೆ.!
ಮತ್ತೆ ಚಿಂದಿ ಆಯುವುದೇ ಕಾಯಕ…..
ಬದುಕು ಬದುಕಲ್ಲ ಬವಣೆ ! “

ಸಾವಿರ ಕನಸುಗಳಿವೆ ಕಂಗಳಲ್ಲಿ ,
ನನಸಾಗುವುದೆಂದೋ ಪ್ರಶ್ನಾರ್ಥಕ ?!
ಹರಿದ ಚೆಡ್ದಿಯಲ್ಲೇ ಮೆರವಣಿಗೆ ,
ಮುಗ್ದ ನಗುವೇ ಬರವಣಿಗೆ..!


Responses

  1. super sir tumba thanks…..

    neevu bareda haage ide swalpa…..

    aadre pada innu swalpa easyaagi artha aagohage bariri….

    aaga ellarigu reach aagutte…

    aadre nanagantu ee kavite tumba ishta aithu…..

    thanksssssssssssssssssss a oooooooooottttt for writing it….

  2. ನಿಮ್ಮೆಲ್ಲಾ ಕವನಗಳೂ ಚೆನ್ನಾಗಿವೆ. ಭಾವನೆಗಳಿಂದ ಭರ್ತಿಯಾಗಿವೆ. ವ್ಯಾಕ್ಯೆಗಳು ಚಿತ್ರಣಗಳೇ ಆಗಿವೆ. ಜೊತೆಗೆ ಅರ್ಥಪೂರ್ಣವಾದ ಚಿತ್ರಗಳನ್ನು ಹಾಕಿದ್ದೀರ.

    ಹೀಗೇ ಬರೆಯುತ್ತಿರಿ.

  3. ಬಹಳ ಸುಂದರ ಚಿತ್ರ ಕಾವ್ಯಗಳು, ಖುಷಿಯಾಯಿತು.


Leave a response

Your response:

Categories