Posted by: ashwath | October 30, 2006

ಕವಿಯಾದೆ ನಾನು….!

ಸೂಜಿ ಕಣ್ಣ ಹುಡುಕುವ ಹಾಗೆ
ಹುಡುಕಿದೆ ನಾ ಗೆಳತಿಗೆ !
ಕಂಡಳೊಮ್ಮೆ ಕನಸ ಕನ್ಯೆ
ನನ್ನ ಮನದ ಅಪ್ಸರೆ..!

ಉಕ್ಕಿತೊಮ್ಮೆ ಮನದ ಕಡಲು
ಆ ಚಂದ್ರ ಕಾಂತಿಗೆ !
ಮಾತು ಮರೆತು ಮೂಗನಾದೆ
ಆ ಮೌನ ರಾಗ ಸ್ವರದಲೇ !

ವಾಸ್ತವ ಮರೆತು , ಅರಿವು ಹೋಗಿ
ಭಾವಲೋಕ ಕಂಡೆನಾ !
ನಿದ್ದೆ ಗಿದ್ದೆ ಏಕೆ ಬೇಕು ?
ಅವಳ ದೃಶ್ಯ ಮಾತ್ರ ಸಾಕು!

ಅವಳ ನಗುವೆ ಬರೆದ ಪಲ್ಲವಿಗೆ ,
ಎಂದೂ ಮುಗಿಯದ ಕವಿತೆಗೆ ,
ಅವಳೇ ಸ್ಪೂರ್ತಿಯಾದ ಸಾಲುಗಳಿಗೆ
ಕವಿಯಾದೆ ನಾನು..!!


Responses

  1. its a real nice one , felt like someone is really waiting to see how his dream girl would be..

  2. ನಿಜ ನಿಜ. ಇವು ಕವಿತೆಗಳು ಮಾತ್ರವಲ್ಲ. ಓದಿದವರ ಹೃದಯದೊಳಗೂ ಇಳಿದುಬಿಡುವ ಮಾಯಾಗೀತೆಗಳು. ನಿಮ್ಮೆಲ್ಲಾ ಕವಿತೆಗಳೂ ‘ಒಂದರಕ್ಕಿಂತ ಒಂದು’ ಚೆನ್ನಾಗಿವೆ.

    ನಿಮ್ಮ ಬ್ಲಾಗಿನ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

    ಧನ್ಯವಾದಗಳು.

  3. ತುಂಬಾ..ತುಂಬಾ ಚೆನ್ನಾಗಿದೆ..


Leave a response

Your response:

Categories