ಮನದ ಗೋಡೆಯಲ್ಲಿ, ನೇತುಹಾಕಿದ ಗಡಿಯಾರದಲ್ಲಿ
ಲಬ್ ಡಬ್ ಲಬ್ ಡಬ್ ….
ಹೇಗೋ ನಡೆಯತ್ತಿದೆ ಕಾಲ …
ನಡುಗುವ ಭಯ ಬಿಟ್ಟಾಗಿದೆ …
ಗೋಡೆ ಈಗ ಭದ್ರವಾಗಿದೆ ….
ನಾಲ್ಕು ಕೊಣೆಗಳಲ್ಲಿ ನಾನೂರು ನೆನೆಪುಗಳು ….
ಕೆಲವು ಚೂರಾಗಿವೆ .. ಕೆಲವು ಧೂಳು ಹಿಡಿದಿದೆ …!!
ಕೆಲವು ಗಡಿಪಾರಾಗಿದೆ …
ಮತ್ತೆ ಕೆಲವು ಮುತ್ತಾಗಿ ಉಳಿದಿವೆ …!!
ವಿಶಾಲ ಪರದೆಯಿದೆ … ದಿನಕ್ಕೊಂದು ಆಟ
ಎಲ್ಲಾ ಸುಂದರ ಚಿತ್ರಗಳು …
ನೆಮ್ಮದಿಯಾಗಿ ಬದುಕುವೆ ಇಲ್ಲೇ ಕನಸು ಹೆಣೆಯುತ್ತಾ ….
ಹೊತ್ತಾಗಿದೆ ನನಸು ಮಾಡಲು ..
ಲಬ್ ಡಬ್ ಲಬ್ ಡಬ್ ….

wow wow !!
Seems to be ur real own Experience
ಕಹಿಯೇ ಆಗಲಿ, ಸಿಹಿಯೇ ಆಗಲಿ,
ಜೀವನದಲ್ಲಿ ನೆನಪುಗಳಿರಲಿ
ಹೀಗೆ ಆಟ ಮುಂದುವರೆಯಲಿ
ಕನಸುಗಳೆಲ್ಲಾ ನನಸಾಗಲಿ
ಲಬ್ ಡಬ್ ಲಬ್ ಡಬ್…
ನಾನೊಬ್ಬ ಕವಿ, ಬಯಸುವುದು ಎರಡು ಕಣ್ಣು, ಎರಡು ಕಿವಿ … !! ನಿಮ್ಮ ಪ್ರೋತ್ಸಾಹಕ್ಕೆ ನನ್ನ ವಂದನೆ.