ಓ ಕಾಣದ ದೇವನೇ ನೀನಿರುವೆಯಾ?!
ಕರುಣಿಸುವೆಯಾ ನನಗೆ ಚಿಕ್ಕ ವರವೊಂದ?!
ಭಯಪಡಬೇಡ ರಕ್ತಬೀಜಾಸುರನಲ್ಲ ನಾನು
ಮಾಡುವೆಯಾ ನನ್ನ ಚಿಕ್ಕದೊಂದು ಬಿಂದು?
ಆಗ ಕರೆಯವರು ಎಲ್ಲಾ ನನ್ನ ಇಬ್ಬನಿಯೆಂದು …
ಅದರಲ್ಲೇ ಆನಂದ ನನಗೆ ಎಂದೆಂದೂ …!!
ಬೆಳಕು ಹರಿದರೆ ಹೂವಲ್ಲಿ ನಾನಿರುವೆ.
ನೀಡುವೆ ರಕ್ಷೆ ಸೂರ್ಯ ರಷ್ಮಿಗಳಿಂದ,
ಸ್ವಚ್ಛ ನಿಸ್ವಾರ್ಥ ಪ್ರೀತಿಯಿಂದ.
ಎಷ್ಟಾದರೂ ಮೃದುವಾದ ಹೂವಾದು.
ಕಿತ್ತರೆ ದೇವರ ಮುಡಿಗೋ,
ಅಥವಾ ಹೆಣ್ಣಿನ ಜಡೆಗೋ?!
ಉದುರಿದರೆ ಆಗುವುದು ಗೊಬ್ಬರ,
ಅಲ್ಲೇ ಇದ್ದಾರೆ ಅದು ಅಮೃತ ಫಲ!!
ಅರೆ, ಕೇಳಿಬರುವುದು ಕೂಗೊಂದು!
ಮಣ್ಣ ಮಗನ ಕೂಗದು.
ಹಾರುವೆ ನಾನಾಗಲೇ ಆಗಸಕ್ಕೆ
ಬೀಡುವೆ ನಾ ಮೊಡದಲ್ಲಿ ಬೀಡು.
ಸ್ನೇಹಿತರನ್ನೊಡಗೂಡಿ ಧರೆಗಿಳಿವೆ.
ಮಳೆಯಾಗಿ ಹೊಸ ಕಳೆ ತರುವೆ.
ನಾ ಬಿದ್ದರೆ ಕುಣಿಯುವುದು ನವಿಲು,
ಚಿಗುರುವುದು ಪೈರು,
ಹಾಡುವುದು ಹಕ್ಕಿಯು
ನಲಿನಲಿಯುವುದು ಜೀವ ಸಂಕುಲವು … !!
ಅರೆ! ಇದಕ್ಕಿಂತ ಇನ್ನೇನು ಬೇಕು?
ಧನ್ಯತೆಯ ಪರಮಾವಾಧಿಯದು!
ಇಬ್ಬನಿಯಾದರೆ ನಾನು …..

ಅಶ್ವತ್ಥ್,
ಒಂದು ಬಿಂದುವಿನಿಂದ ಇಬ್ಬನಿಯಾಗಿ
ಇಬ್ಬನಿಯಿಂದ ನಿಮಗೆ ಆನಂದವಾಗಿ
ಆನಂದದಿಂದ ಹೂವಲ್ಲಿ ಹೋಗಿ
ಮುಡಿಗೋ, ಜಡೆಗೋ, ಗೊಬ್ಬರಕ್ಕೋ ಫಲವಾಗಿ
ಮೋಡದಲ್ಲಿ ಬೀಡಾಗಿ, ಕುಣಿಯುವ ನವಿಲಾಗಿ
ನಲಿವಿನಿಂದ ಜೀವ ಸಂಕುಲವಾಗಿ
ಅಬ್ಬಬ್ಬಾ ಎಲ್ಲಾ ಸಾಲುಗಳು ಓದುಗರಿಗೆ ಸೊಗಸಾಗಿ
ಮೂಡಿಬಂದಿದೆ ಚೆನ್ನಾಗಿ
ಧನ್ಯವಾದಳು
ತುಂಬಾ ಚೆನ್ನಾಗಿದೆ
ನಿಮ್ಮ ಅನಿಸಿಕೆ
ಧನ್ಯವಾದಗಳು …:)
ಮನಸಲಿ ಮಳೆ ತರುತಿದೆ ನಿಮ್ಮ ಕವಿತೆ… ವಂದನೆಗಳು
no
comment.
Super mama..