ನಾನೆಂಬ ಅಡುಗೆ ಭಟ್ಟ …

 

ನಾನೆಂಬ ಅಡುಗೆ ಭಟ್ಟ …
ತಯಾರಿಸುವ ಬಗೆಬಗೆ ಭಕ್ಷ್ಯಗಳ …
ಮಾಡುವ ವಿಧಾನ ಆದರೂ ನಿಧಾನ, ಬಲು ರುಚಿಕರ!
ತೋಚಿದಾಗ ಮಾತ್ರ ಅಡುಗೆ ಮಾಡುವ ಹುಚ್ಚು ಭಟ್ಟ.

ಉಕ್ಕುವ ಹಾಲ್ಭಾವನೆಗಳಿಂದ ಖ್ಹೋವಾ ತಯಾರಿಸುವ
ಹಾ…! ನಿಜ ಇವನೊಬ್ಬ ಕವಿ ..!
ಕವಿಯಾದರೇನೂ, ಇವ ನಳ ಮಹಾರಾಜ ..
ಎಂದೂ ಕೆಡದ ಹಾಗೆ ಬೇಯಿಸುವ ಪಾಕ ಪ್ರವೀಣ!

ಭಾವನೆಗಳು ಯಾವಾಗ ಉಕ್ಕುವುದೋ ತಿಳಿದಿಲ್ಲ
ಉಕ್ಕಿದಾಗ ಬೇಕು ಲೇಖನಿ, ಹಾಳೆ ..
ಕಡಿಮೆಯಾಗುವುದು ಬೇಡ ಶಾಖ,
ಉಕ್ಕುವ ಭಾವನೆ, ಸ್ವಲ್ಪ ಸೀದ ಕನಸುಗಳ ಅಡುಗೆ!

ರುಚಿಯೋ ಆಹಾ ವೈವಿಧ್ಯಮಯ!
ಕೆಲವು ಸಿಹಿ, ಕೆಲವು ಖಾರ
ಕೆಲವು ಉಪ್ಪು, ಹುಳಿ … ಅಥವಾ ಎಲ್ಲಾದರ ಮಿಶ್ರಣ!!
ಯಾವುದೋ ಒಂದೊಂದು ಮಾತ್ರ ಒಗರು ..!

8 thoughts on “ನಾನೆಂಬ ಅಡುಗೆ ಭಟ್ಟ …

  1. ಹಿರಿಯರು ಹೇಳಿದ್ದಾರೆ, ನಿಧಾನವೇ ಪ್ರಧಾನ
    ಒಮ್ಮೆಯಾದರೂ ಅಡುಗೆ ಮಾಡುವುದಕ್ಕೆ ನಮನ

    ಮಾಡಿದ ಅಡಿಗೆ ಪ್ರೀತಿಯಿಂದ ಬಡಿಸಿದರೆ ಇನ್ನು ರುಚಿಕರ
    ಭಾವದೊಂದಿಗೆ ಲೇಖನಿ ಹಿಡಿದರೆ, ಬರೆಯುವ ಕವನ ಸ್ಪೂರ್ತಿಕರ

    ಉಪ್ಪು, ಹುಳಿ, ಒಗರು, ಸಿಹಿ ಖಾರದ ಮಿಶ್ರಣವೇ ಜೀವನ
    ಪ್ರತಿಯೊಬ್ಬರಿಗೂ ಇಟ್ಟುಕೊಳ್ಳಬೇಕು ಜೀವನದಲ್ಲಿ ಗುರಿಯನ್ನ

  2. ಹಿರಿಯರು ಹೇಳಿದ್ದಾರೆ, ನಿಧಾನವೇ ಪ್ರಧಾನ
    ಒಮ್ಮೆಯಾದರೂ ಅಡುಗೆ ಮಾಡುವುದಕ್ಕೆ ನಮನ

    ಮಾಡಿದ ಅಡಿಗೆ ಪ್ರೀತಿಯಿಂದ ಬಡಿಸಿದರೆ ಇನ್ನು ರುಚಿಕರ
    ಭಾವದೊಂದಿಗೆ ಲೇಖನಿ ಹಿಡಿದರೆ, ಬರೆಯುವ ಕವನ ಸ್ಪೂರ್ತಿಕರ

    ಉಪ್ಪು, ಹುಳಿ, ಒಗರು, ಸಿಹಿ ಖಾರದ ಮಿಶ್ರಣವೇ ಜೀವನ
    ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು ಜೀವನದಲ್ಲಿ ಗುರಿಯನ್ನ

  3. ನಮ್ಮ ಅಡುಗೆ ರುಚಿ ತಿಳಿಸಿ, ಮತ್ತೆ ಮಾಡಲು ಹುರಿದುಂಬಿಸುವ ನಿಮಗೆ ನನ್ನ ಪುಟ್ಟ ಧನ್ಯವಾದ. :)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s