Posted by: ashwath | October 2, 2006

ಪ್ರೀತಿಯೇ…?!

 

ಗುಟ್ಟು ಕೇಳೇ ಚಂದ್ರ ಚಕೋರಿ ,
ಮನ ತುಂಬಾ ನಿಂದೇ ಹಾಡಿದೆ .
ಮೋಹನ ಸಮ್ಮೊಹನ ನನ್ನ ಮನಸನೇ ಅತಿಕ್ರಮಿಸಿದೆ.
ಆ ತುಂಬು ಚಂದ್ರನ ಮೇಲಾಣೆಯೇ …………..
ಈ ಮನಸು ಎಂದೂ ನಿನಗೇ ಮೀಸಲೇ…!
ಇದು ಕೂಗಾಟವೋ ,ಹಾರಾಟವೋ…?
ಈ ತೊದಲ್ಮಾತಿಗೆ ಅದೇನೇ ಹೆಸರು..?
ಪ್ರೀತಿಯೇ ,…ಓ ಪ್ರೀತಿಯೇ,
ಇದು ಮೌನ ರಾಗದಲೇ ಮಿಡಿಯೋ ಮನಸೇ..!
ನಿನ್ನ ನೋಡ ಬೇಕೆಂದು,
ಒಂದು ಮಾತು ಹೇಳಬೇಕೆಂದು ,
ಒದ್ದಾಡುತ್ತಿದೆ ಈ ಮನ ಗೊತ್ತಾ..?!
ಸಾವಿರ ಜನ್ಮ ಕಾಯುವೆ ಎಂದು,
ಎಂದಾದರೂ ನೀ ಪ್ರೀತಿಸೆಂದು,
ಕೂಗಿ ಹೇಳುತ್ತಿದೆ ಗೊತ್ತಾ..?!
ಪ್ರೀತಿಯೇ…, ಓ ಪ್ರೀತಿಯೇ ,
ನಿದ್ದೆ ಇಲ್ಲದೇ ಕನಸು ಕಾಣುವ ಹುಚ್ಚ ನಾನಾದೇನೇ..!
ಹಗಳು ಇರುಳು ಭೇಧವೇನೋ ಒಂದೂ ನನಗೆ ತಿಳಿಯದೇ..!
ನಾ ಪ್ರೀತಿಯ ಮಳೆಯಲೇ ತೊಯ್ದು ಹೋದೆನೇ..
ಎಲ್ಲಿ ಏನಾಗುತ್ತಿದೆಯೋ ನನಗೆ ಅರಿವಾಗದೇ..!
ಇದು ಮೋಹವೋ ವ್ಯಾಮೋಹವೋ…
ಈ ಹುಚ್ಚು ಮಾಯೇಗೇನೇ ಹೆಸರು…?!

Posted by: ashwath | October 2, 2006

ನಿರಂತರ……!

ಹೃದಯಾಳದಿ ಹನಿಹನಿ ಚಿಲುಮೆಯ ಕಾರಂಜಿ !
ಈಗ ನದಿಯಾಗಿ ಹರಿಯುತಿದೆ ನರ ನಾಡಿಗಳಲ್ಲಿ .
ಅಲೆಗಳ ಏರಿಳಿತ, ಹೆಚ್ಚಾದ ಉಸಿರಾಟ !
ಜುಳು ಜುಳು ಸಂಗೀತ ,ನಿನ್ನದೇ ತಕಧಿಮಿತ !
ಭಾವದ ತಾಳಕ್ಕೆ ಅಗಣಿತ ಎದೆಬಡಿತ !

ಎಲ್ಲ ಒಂದೆಡೆ ನಿಲ್ಲಿಸುವ ಯತ್ನ !
ನದಿ ನಿಂತಾಗ ಅಲ್ಲೊಂದು ಪ್ರಶಾಂತ ಕಡಲು !
ಅರೆ ! ಅಲ್ಲಿಯೂ ನಿನ್ನದೇ ಪ್ರತಿಬಿಂಬವು !
ಇನ್ನೂ ನಿಲ್ಲದ ಆ ಭಾವದ ಅಲೆಗಳು !
ಅಲ್ಲ್ಲಾ ! ಎಂದೂ ನಿಲ್ಲದ ಅಲೆಗಳವು..?!

Posted by: ashwath | October 1, 2006

ಪಾಪಿ ಬೆಳಕೇ….!

ಪಾಪಿ ನೀನು ಬೆಳಕೇ ….
ಅಯ್ಯೋ, ಪಾಪಿ ಬೆಳಕೇ…..

ಕತ್ತಲೆಯಾ ಒಳಗೆ ಹಾಯಾಗಿದ್ದೆ ನಾನು,
ನನ್ನ ನೋವ ನಾನೇ ತಿಂದು.
ಬಂದೆ ನೀನು ಬಾಳಿನಲ್ಲಿ,
ತಣ್ಣಗಿದ್ದ ಇರುಳ ಕದಡುವಲ್ಲಿ… ||ಪಾಪಿ ನೀನು||

ಮಾನ ಕೆಳೆಯಲು ಹರಿದಾಡುವೆ,
ಬಡ ಅಬಲ ಸ್ತ್ರೀಯ ಹರುಕಿನಲ್ಲಿ.
ಮಾನ ಕಳೆವೆ ಪಾಪಿ ಬೆಳಕೇ,
ಕಾಮುಕರ ದೃಷ್ಟಿ ತಣಿಸುವಲ್ಲಿ. ||ಪಾಪಿ ನೀನು||

ಕತ್ತಲೆಯೇ ಎಷ್ಟೋ ವಾಸಿ,
ಮಾನ ಮುಚ್ಚುವುದು ಭದ್ರವಾಗಿ,
ಅಸಹಾಯಕತೆಯ ನೋವ ಮರೆಸಿ.
ಟೀಕೆಗಳಿಗಿನಿತೂ ದಾರಿ ಕೊಡದೇ..|| ಪಾಪಿ ನೀನು||

Posted by: ashwath | October 1, 2006

ಭಾವನೆಗಳೆಲ್ಲಿ ?

ಬರೆಯಲು ಹಾಳೆಯಿದೆ .
ಕೈಯಲ್ಲಿ ಸೊಗಸಾದ ಲೇಖನಿಯಿದೆ.
ಭಾವನೆಗಳು……………..
ಭಾವನೆಗಳು ಬರುತ್ತಿಲ್ಲ ಹೊರಗೆ….!
ಎಲ್ಲ ಹುದುಗಿವೆ ಅಂತರಾಳದ ಸಮಾಧಿಯೊಳಗೆ !!

Posted by: ashwath | September 30, 2006

ಬೆಳದಿಂಗಳಾಗಿ

ಬಿದಿಗೆ ಚಂದ್ರನೇ ಕ್ಷಮಿಸುವೆಯಾ,
ಹೋಲಿಸಿದೆ ನಿನಗೆ ಪ್ರೇಯಾಸಿಯಾ !!
ಕರಗಿಹೋಗುವೆ ನೀನು ಅಮಾವಾಸ್ಯೆಯಾಗಿ….
ಮಾಯವಾದಳವಳು ಕೃಷ್ಣ ಪಕ್ಷದಲ್ಲಿ !!
ಮತ್ತೆ ಮತ್ತೆ ನೆನಪಾಗಿ…..
ನೆನಪಾಗಿ ಕಾಡುವಳು ಬೆಳದಿಂಗಳಾಗಿ!!!

Posted by: ashwath | September 30, 2006

ಕವನ

ಕಟ್ಟಲು ಕವನ ಕಟ್ಟಡದಂತಲ್ಲ ,
ಗಾಳಿಯಂತೆ, ಮಳೆಯಂತೆ,
ಸುಂದರ ಪ್ರಕೃತಿಯಂತೆ..
ಜೀವನ ಪ್ರೀತಿಯಂತೆ…
ತಂತಾನೇ ಬರುವುದಂತೆ..!!!

« Newer Posts

Categories