ಎಚ್ಚರಿಕೆ …!

ಚಿತ್ರ

horse-racing-hurdle-jump

Advertisements

ಮೊಳಕೆ ಸಾರು

ಚಿತ್ರ

ಮೊಳಕೆ ಸಾರು

ನಮ್ ಬೆಂಗ್ಳೂರು

Image

ಕೆಂಪಿಟ್ಟಿಗೆಗಳಿಂದ ಕೆಂಪೇಗೌಡರು ಕಟ್ಟಿದ ಹಟ್ಟಿಗಳಿಂದಿಲ್ಲ!
ಆದರೂ, ಈ ಕಾಂಕ್ರೀಟು ಕಾಡಿನಲ್ಲಿ, ದಟ್ಟ ಹೊಗೆಯ ಮರೆಯಲ್ಲಿ
ಇಲ್ಲೆಲ್ಲೋ ಇನ್ನೂ ಇವೇ ಪಾಳು ಬಿದ್ದ ಅದೇ ಹಟ್ಟಿಗಳು!
ಸಾಲು ಬದಿಯ ಮರಗಳಿಲ್ಲ, ಹೊಂಡಗಳಿಲ್ಲದ ರಸ್ತೆಗಳಿಲ್ಲ!
ಬೆಂದಕಾಳೂರಲ್ಲ ಈಗಿದು ‘ನಮ್ ಬೆಂಗ್ಳೂರು’

ಪುಡಿಗಾಸಿಗಾಗಿ ಪುಡಿ ಪುಡಿಯಾದ ಮೂಳೆಗಳಿವೆ ಇಲ್ಲಿ!
ಪ್ರೀತಿ ಕಾಣದ ಅಮಾಯಕ ಸಾವಿರ ಕಂಗಳಿವೆ ಇಲ್ಲಿ!
ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ….. ರಿಲ್ಲದ ಊರಿದು!
ಡ್ಯಾಡಿ, ಮಮ್ಮಿ, ಅಂಕಲ್, ಆಂಟಿ…..ಗಳ ಅಪರಿಚಿತ ಊರಿದು!
ಅ, ಆ, ಇ, ಈ ಕಾಣಸಿಗದ ಊರಿದು ‘ನಮ್ ಬೆಂಗ್ಳೂರು’

ಬೆಳಗಾಗುವುದಿಲ್ಲಿ ಕೋಳಿ ಕೂಗಿನಿಂದಂತೂ ಅಲ್ಲ!
ಹಾಲುಡುಗನ ಕೋಗಿನಿಂದಲೋ ಅಥವಾ ಅಲಾರಮ್ಮಿನಿಂದಲೋ?
ನಮಸ್ಕಾರದ ಆದರದ ನಗೆಯೆಂದೋ ಹೊರಟು ಹೋಯಿತು …
‘ಹಾಯ್’, ‘ಬಾಯ್’ ಗಳ ಕೃತಕ ನಗೆ ಬೆಳಕಿನ ಹಿಂದೆ!
‘ಸಾರಿ’, ‘ಎಕ್ಸ್ ಕ್ಯೂಸ್ ಮೀ’ ಗಳ ಊರಿದು ‘ನಮ್ ಬೆಂಗ್ಳೂರು’

ಪ್ರತಿದಿನವೂ ಓಕುಳಿಯಾಟ ನಡೆಯುವುದಿಲ್ಲಿ!
ಕೃತಕ ರಂಗಿನಿದಲ್ಲ, ಜೀವಂತ ಓಕುಳಿಯಿಂದ!
ಪ್ರತಿದಿನ ಎಷ್ಟೋ ಮನೆಗಳೆದುರು ಹೊಗೆಯಾಡುವುದಿಲ್ಲಿ.
ಜಗಳದ ಕಟ್ಟಿಗೆಗಳಿಗೆ, ದ್ವೇಷದ ಬೆಂಕಿ ಹಚ್ಚುವರಿಲ್ಲಿ..
‘ತನ್ನತನ’ ಮೆರೆಯುತ್ತಿರುವ ಊರಿದು ‘ನಮ್ ಬೆಂಗ್ಳೂರು’

ಬಂಗಲೆಯೊಳಗಿನ ಬಿಂಕದ ಮಾತುಗಳು, ವ್ಯರ್ಥವಾಗುವ ತಿಂಡಿಗಳು,
ಇಲ್ಲೇ ಎಲ್ಲೋ ಕೊಳಗೇರಿಯಲ್ಲಿ ಹಸಿದು ನರಳುವ ಹೊಟ್ಟೆಗಳು!
ಎದೆ ಹಾಲು ಕುಡಿಯದ, ತಾಯ್ತಂದೆ ಪ್ರೀತಿ ಕಾಣದ ಮಕ್ಕಳಿವೆಯಿಲ್ಲಿ!
ಲಕ್ಷ ಮಂದಿಯಿದ್ದರೇನು? ನಿಮಿಷ ಸಮಯವಿಲ್ಲ ಯಾರಿಗೂ!
ಬರೀ ಅನಾಥರಂತಿರುವ ಊರಿದು ‘ನಮ್ ಬೆಂಗ್ಳೂರು’

ಇನ್ಮುಂದೆ…. ಕಣ್ಮುಂದೆ …..

ನೆನೆದು ನೆನೆದು ನೆನೆಗುಂದಿ ಹೋಗಿದೆ …
ನೆನಪಲಿ಼ ಬರೆದ ಸಾಲುಗಳು…
ಕಣ್ಮುಂದೆ ಬಾರೆ, ಕರಗಿಸಿ ಬರೆವೆ
ಕಲ್ಪನೆಯನ್ನೇ ನಾನು …
ಮನಸಿಗಿಲ್ಲ ಎಂದೂ ಸಮಾಧಾನ..
ನೀ ಎದುರಿಲ್ಲದಾಗ ಎಲ್ಲಾ ಸಾವಧಾನ !!

ಕಣ್ಸಮಯ….!!

ಕಾಂತಿಗೂ ಕಾಂತಿ ಹಂಚೋ,
ಬೆಳದಿಂಗಳು ನಿನ್ನ ಕಣ್ಣ ಗೂಡು …
ಆಯಸ್ಕಾಂತವೋ, ಮಾಯಾಜಾಲವೋ
ಬಂಧಿಖಾನೆಯೋ…?!
ಆತಂಕವಾದಿಯಲ್ಲ …,
ಆಗುಂತಕ ಅಲ್ಲವೇ ಅಲ್ಲ.
ಹುಡುಕುತ್ತಿರುವೆನು ಕಳೆದ ನನ್ನನ್ನು…
ದಾರಿ ತಪ್ಪಿಸೋ ಕಣ್ಣೋಟ ನಿನ್ನದು ..!

ಕಣ್ಣಲ್ಲೇ ಕಟ್ಟಿ ನೀನು .,..
ಹಿಡಿದಿಟ್ಟ ಖೈದಿ ನಾನು …
ಜೀವಿತಾವಧಿ ನಿನ್ನ ಕಣ್ಣಲ್ಲೇ ..
ಸೆರೆವಾಸ ಖಾತ್ರಿಯೋ …?!
ಅಪರಾಧಿ ನಾನು ಅಲ್ಲ …
ಬಿಡುಗಡೆ ಬೇಕಿಲ್ಲ …!
ಕಣ್ಣ ಬಿಂಬದಿ ಈ ಬಂಧನ
ಹಿತವಾಗಿದೆ ಏನು ಕಾರಣ?

ಬೇರೆ ಏನೋ ಶಬ್ದ ಬೇಕು …
ಉಪಮಾನವೆಲ್ಲಾ ಖಾಲಿಯಾಯ್ತು!
ಕವಿಗಳೆಲ್ಲರೂ ಒಟ್ಟಾದರೂ …
ಸೃಷ್ಟಿಯಾಗದು …!!!
ಕಾಣೆಯಾಗಿ ಹೋದೆನಲ್ಲಾ,
ವರ್ತಮಾನ ಬೀಕಿಲ್ಲ ….!
ಬೇರೆ ಯಾರಿಗೂ ನೀ ಕಾಣಬೇಡವೇ …
ದೃಷ್ಟಿಯಾದೀತು … ನನ್ನ ಸ್ವಾರ್ಥ ಹೆಚ್ಚಿದೆ …!!

ತುಂಟತನಕು ತುಂಟು ತರಿಸೋ,
ತಂಟೆ ಮಾಡೋ ನೋಟವೇನೋ?
ತುಂಟಾನಾದೆನೋ, ಕವಿಯಾದೆನೋ,
ಪ್ರೇಮಿಯಾದೆನೋ..?!
ಅನುರಾಗವೇನೋ,
ಅನುಬಂಧವೇನೋ…!
ತಪ್ಪು ತಿಳಿಯದೇ ಕ್ಷಮಿಸು ನನ್ನನು ..
ಅನುಮತಿಯೇತಕೆ ಪ್ರೀತಿ ಮಾಡಲು …!!

ಭಾಷೆಗೂ ಭಾಷೆ ಕಲಿಸೊ,
ಪದಪುಂಜ ನಿನ್ನ ನೋಟವೇನೋ …?!
ವರ್ಣಮಾಲೆಯೊ, ಕಾಗುಣಿತವೋ …
ಹೊಸ ಶಬ್ದಕೋಶವೋ!
ಆಶ್ಚರ್ಯವೇನೋ…
ಅವಕಾಶವೇನೋ,
ಸುಮ್ಮನಿದ್ದರೂ ಸೃಷ್ಟಿಯಾಗಿದೆ …
ಸಾಹಿತ್ಯವೇ ಸಮೀಕರಣವಾಗಿದೆ …

ಓ, ಕಾಲಪುರುಷ !

ಇದು ನಾ ಬರೆದ ಮೊದಲ ಕವನ.. ೨೦೦೦ ಇಸ್ವಿ ಸಂಕ್ರಾಂತಿ ಹಿಂದಿನ ದಿನ ಮೂಡಿದ ಸಾಲುಗಳು …!
ಓ, ಕಾಲಪುರುಷನೇ ಬಂದೆಯಾ?
ಹಳೆಯ ಕಹಿಯ ಮರೆಸಲು ಸವಿ ಬಿಡಿಸುವೆಯಾ?
ಇಟ್ಟು ಹೋಯಿತು ಸಹಸ್ರ ಚುಕ್ಕಿಯ ಆ ಸಹಸ್ರಮಾನ!
ನೀ ಬಿಡಿಸುವೆಯಾ ಇದರಲ್ಲೊಂದು ಸುಂದರ ಚಿತ್ತಾರವ?!
ಅದು ಕೊಟ್ಟಿತು, ಕಿತ್ತುಕೊಂಡಿತು ನೂರಾರು ದಿವ್ಯ ಚೇತನಗಳ!
ನೀನಿಂದು ಕೊಡಬಲ್ಲೆಯಾ? ಒಂದು ಅಮರ ಚೇತನ?
ಮುಚ್ಚಬಲ್ಲೆಯಾ ತೂತು ಮಡಿಕೆಯಾ?
ಕಟ್ಟಬಲ್ಲೆಯಾ, ನವ ಶಾಂತಿ ಸಾಮ್ರಾಜ್ಯವ?!
ಹಿಂದೆ ನಡೆದಿತ್ತು ಎಷ್ಟೋ ಅವಿಷ್ಕಾರ ಕ್ರಾಂತಿ!
ಆದರೇನು? ಕರಗಲಿಲ್ಲ ಅಂಧಕಾರ ಭ್ರಾಂತಿ;
ದೂರ ಸರಿಸುವೆಯಾ ಮನದಲ್ಲಿನ ಭೀತಿ!
ಎಂದು ನೀಡುವೆ ಸಕಲ ವಿಶ್ವಶಾಂತಿ?!
ಓ, ಬಾನ್ ಬೆಳಗುವ ಹೊಸ ನೇಸರನೇ.
ಕಾಣಿಸಲಿಲ್ಲವೇ ಈ  ಗಾಢಾಂಧಕಾರ
ಕೇಳಿಸಲಿಲ್ಲವೇ ನನ್ನೀ ಮನದ ಇಂಗಿತ?
ಎಂದು ಬೆಳಗುವೆ ಈ ಹೃದಯದ ಅಂಕಿತ?!
ಓ, ನಿಶೆಯ ತಾರೆ ಶಶಿಯೇ.
ಎಷ್ಟು ಇರುಳ ಕಂಡಿರುವೆ ಈ ಭೂತಾಯಿಯ?
ಹೊತ್ತಿಕೊಂಡು ಉರಿಯುತ್ತಿವೆ ಹೃದಯಗಳು, ತಣಿಸಲಾರೆಯಾ?
ಮಾನವೀಯತೆಯ ರಕ್ಷಿಸಲು ಶಾಂತದೂತ ನೀನಾಗುವೆಯಾ?!..

ಚಿಲುಮೆ

ಹರಿದ ಹೃದಯದಲ್ಲಿ,
ಹೊಸದಾಗಿ ಚಿಲುಮೆ ಉಕ್ಕಿದೆ.
ಪೋಲಾಗಲು ಬಿಡದೆ ಪಾತಿ ಕಟ್ಟುವೆ!
ಇರುವ ಜಾಗದಲ್ಲಿ ಹೂದೋಟ ಮಾಡುವೆ,
ಪ್ರೀತಿಯ ಗೊಬ್ಬರ ಹಾಕಿ ಕಾಪಾಡುವೆ!

ಕಪ್ಪಾದರೆ ಕಂಪಿಸುವೆ…
ಕಂಪು ಸೂಸಲು ತಂಪಾಗುವೆ.
ಹೂವಾಗಲಿ, ಫಲವಾಗಲಿ,
ನನಗೆ ಸೇರಬೇಕೆಂದಿಲ್ಲ!